ಆತ್ಮೀಯ ಮುಖ್ಯಶಿಕ್ಷಕ ಮತ್ತು ಶಿಕ್ಷಕ ಬಂದುಗಳೆ
ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಕೆಲವೊಂದು ಸಲಹೆ ಸೂಚನೆಗಳು
1.2017-18ನೇ ಸಾಲಿನ ಅನುದಾನ ಹಾಗೂ ನಿರ್ವಹಣಾ ಹಣವನ್ನು ಸಂಪೂರ್ಣ ಖರ್ಚು ಮಾಡಿ 30/3/18ರ ಒಳಗೆ ರಶೀದಿಗಳನ್ನು ಇಡುವುದು
2.ನಿಯಮಾನುಸಾರ ಅನುದಾನ ಖರ್ಚು ಮಾಡಿ ದಾಖಲೆಗಳನ್ನು,ಕ್ಯಾಸ್ ಬುಕ್ ಅನ್ನು ನಿರ್ವಹಿಸುವುದು
3. ಪರೀಕ್ಷೇಗಳನ್ನು ಮುಗಿಸಿ ಮೌಲ್ಯಮಾಪನವನ್ನು ಮಾಡಿ 5 ರ ಒಳಗೆ ಕ್ರೋಢೀಕೃತದಲ್ಲಿ ಕಡ್ಡಾಯವಾಗಿ ದಾಖಲಿಸಿ ಘೋಷ್ವಾರೆ ಹಾಕಿ ದಿನಾಂಕದೊಂದೀಗೆ ಸಹಿ ಹಾಕುವುದು.
4. ಫಲಿತಾಂಶ ಹಾಗೂ ಮಕ್ಕಳ ಪ್ರಗತಿಯನ್ನು SATS ನಲ್ಲಿ ಕಡ್ಡಾಯವಾಗಿ ದಾಖಲಿಸುವುದು.
5.ಮಕ್ಕಳ ದಾಖಲಾತಿ ಪುಸ್ತಕದ ಪ್ರತಿಯೊಂದು ವಿವರವನ್ನು ದಾಖಲಿಸಿ ಪುಸ್ತಕವನ್ನ ಬೈಂಡ್ ಮಾಡಿಸುವುದು.
6.ನಗದು ಪುಸ್ತಕವನ್ನು ಪೂರ್ಣಗೊಳಿಸಿ, ಘೋಷ್ವಾರೆ ಹಾಗೂ ಸಹಿ ಹಾಕಿ. 01/04/18 ರ ನಂತರ ಯಾವುದೇ ನಗದು ವಹಿವಾಟು ಮಾಡಬೇಡಿ.
7. ನಗದು ಪುಸ್ತಕವನ್ನು ಚಟುವಟಿಕಾವಾರು ಪ್ರತ್ಯೇಕ ಪುಸ್ತಕದಲ್ಲಿ ನಿರ್ವಹಿಸುವುದು ಕಡ್ಡಾಯ.
8. ಮಾರ್ಚ್ 31ಕ್ಕೆ ಎಲ್ಲಾ ವಹಿಗಳನ್ನು ನಿರ್ವಹಿಸಿ ಮುಖ್ಯಶಿಕ್ಷಕರು ಸಹಿಮಾಡಿ CRP ಗಳಿಂದ ಪರಿಶೀಲಿಸಿಕೊಳ್ಳುವುದು.
9. ಎಲ್ಲಾ ದಾಸ್ತಾನುಗಳನ್ನು ದಾಸ್ತಾನು ಪುಸ್ತಕದಲ್ಲಿ ದಾಖಲಿಸಿ ಸಹಿ ಮಾಡುವುದು.
10. ರಜಾ ಅವಧಿಯಲ್ಲಿ ಎಲ್ಲಾ ಶಿಕ್ಷಕರ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಇಲಾಖೆಯ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುವುದು.
11. ಪ್ರತೀ ತಿಂಗಳು ಶಿಕ್ಷಕರ ಅನಧಿಕೃತ ಗೈರುಹಾಜರಿ, ಧೀರ್ಘಕಾಲಿಕ ರಜೆ ಹಾಗೂ EL ಗಳ ಮಾಹಿತಿಯನ್ನು ನೀಡುವುದು.
12.ಮುಂದಿನ ಶೈಕ್ಷಣಿಕ ವರ್ಷದ ಕ್ರಿಯಾಯೋಜನೆ ತಯಾರಿಸಿಕೊಂಡು ,ಎಲ್ಲಾ ಕಡತಗಳ ಸಿದ್ದತೆ ಮಾಡಿಕೊಳ್ಳುವುದು
13.ಶಾಲಾವಾರು ಚಾರ್ಜ್ ಲಿಸ್ಟ್ ಅನ್ನು ತಯಾರಿಸಿ ನಿವೃತ್ತಗೊಳ್ಳುವ ಶಿಕ್ಷಕರು ಚಾರ್ಜ್ ನೀಡುಬೇಕು.
14. ಶಾಲೆ ಮುಚ್ಚಿರುವ ಮು ಶಿ ಗಳು ಆ ಶಾಲೆಯ ಎಲ್ಲಾ ಕಡತಗಳು ಹಾಗೂ ಮಾಹಿತಿಯನ್ನು ಪಕ್ಕದ ಶಾಲೆಗೆ ನೀಡಿ ಕಡ್ಡಾಯವಾಗಿ ಸಹಿ ಪಡೆಯುವುದು.
15. ಈ ಸಾಲಿನ ಪುಸ್ತಕಗಳನ್ನು ಹಿಂಪಡೆದು Book bank ತಯಾರಿಸುವುದು.
16. ನಿಯೋಜನೆ ಇರುವ ಶಿಕ್ಷಕರನ್ನು ಮಾರ್ಚ್ 31 ಕ್ಕೆ ಬಿಡುಗಡೆಗೊಳಿಸಿ ಮೂಲಶಾಲೆಗೆ ಕಳುಹಿಸುವುದು.
17.. 2018-19 ನೇ ಸಾಲಿಗೆ ಮಕ್ಕಳ ಧಾಖಲಾತಿ ಹೆಚ್ಚಿಸಲು ಶಾಲಾ ಹಂತದಲ್ಲಿ ಪ್ರಚಾರಕಾರ್ಯವನ್ನು ಕಡ್ಡಾಯವಾಗಿ ಕೈಗೊಳ್ಳುವುದು.
18.ಏಪ್ರಿಲ್ 14 ರಂದು ಎಲ್ಲಾ ಶಿಕ್ಷಕರು ಹಾಜರಿದ್ದು ಕಡ್ಡಾಯವಾಗಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸುವುದು.
19. 07/04ರಂದು ಪ್ರಾಥಮಿಕ ಶಾಲೆ ಹಾಗೂ 09/04 ರಂದು ಪ್ರೌಢಶಾಲೆಗಳ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡಡೆಯುತ್ತದೆ. ಮೇಲ್ವಿಚಾರಕರಾಗಿ ಅಕ್ಟೋಬರ್ ನಲ್ಲಿ ಬಂದಿದ್ದವರೇ ಬರುತ್ತಾರೆ.
20. ಇಲಾಖೆಯ ಎಲ್ಲಾ ಮಾಹಿತಿಗಳು ಇನ್ನು ಮುಂದೆ mail ಅಲ್ಲಿ ಬರುವುದರಿಂದ ಶಾಲೆಯ ಹೆಸರಿನಲ್ಲಿ Email ವಿಳಾಸವನ್ನು ರಚಿಸಿಕೊಳ್ಳುವುದು ಕಡ್ಡಾಯ.
21. ಏಪ್ರಿಲ್ 11 ರಿಂದ ಮೇ 27 ರವರೆಗೆ ಬೇಸಿಗೆ ರಜೆ ಇರುತ್ತದೆ. ಮೇ 28ರಂದು ಶಾಲೆಗಳು ಪುನಾರಂಭಗೊಳ್ಳುತ್ತದೆ.
22.ಕಲಿಕಾ ಫಲಿತಗಳನ್ನು ಎಲ್ಲಾ ತರಗತಿಗಳಲ್ಲೂ ಪ್ರದರ್ಶಿಸಬೇಕು.
23. Eco club ನ 5000/ರೂಗಳ ಉಪಯೋಗಿತಾ ರಶೀದಿಗಳನ್ನು ಸಲ್ಲಿಸುವುದು.
24.. ಆಧಾರ್ ಇಲ್ಲದೇ ಮಕ್ಕಳನ್ನು ಧಾಖಲುಮಾಡಿಕೊಳ್ಳುವಂತಿಲ್ಲ.ಆದಾರ್ ನಂ.ಪಡೆದು ಕ್ರಮವಹಿಸುವುದು
25.. CSAS ಪರೀಕ್ಷೆಯ ಪರಿಹಾರ ಬೋಧನೆಯನ್ನು ಪೂರ್ಣಗೊಳಿಸಿ.
26.. ರಜಾ ಅವಧಿಯಲ್ಲಿ ಎಲ್ಲಾ ಶಿಕ್ಷಕರೂ ಚುನಾವಣಾ ಕೆಲಸಗಳಿಗೆ ಸಹಕರಿಸಿ.
27...ಇಲಾಖಾ ಅಧಿಕಾರಿಗಳ ದೂರವಾಣಿ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ಮತ್ತು ಪಾಲಿಸಿ.
ಆತ್ಮೀಯ ಶಿಕ್ಷಕ ಮಿತ್ರರೇ ಈ ಮೇಲ್ಕಂಡ ಎಲ್ಲಾ ಮಾಹಿತಿಗಳ ಸಾಕಾರಕ್ಕೆ ಕ್ರಮ ಕೈಗೊಳ್ಳಿ.
ಶುಭವಾಗಲಿ