ಏಪ್ರಿಲ್ನಲ್ಲೇ ಸಿಗಲಿದೆ ಪರಿಷ್ಕೃತ ಶ್ರೇಣಿ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಪರಿಷ್ಕೃತ ವೇತನ ಶ್ರೇಣಿಯನ್ನು ಏಪ್ರಿಲ್ ತಿಂಗಳಿನಿಂದಲೇ ನೀಡಲು ಹಣಕಾಸು ಇಲಾಖೆ ಸಿದ್ಧತೆ ನಡೆಸಿದೆ.
2018ರ ಏಪ್ರಿಲ್ 1ರಿಂದ ನೂತನ ವೇತನ ಶ್ರೇಣಿ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಪರಿಷ್ಕೃತ ವೇತನ ಶ್ರೇಣಿ ಕುರಿತ ಕೈಪಿಡಿ ಇನ್ನೂ ಸಿದ್ಧವಾಗಿಲ್ಲ. ಈ ಕೈಪಿಡಿಯಲ್ಲಿ ಯಾವ ಶ್ರೇಣಿಯ ವೇತನದಲ್ಲಿ ಎಷ್ಟು ವ್ಯತ್ಯಾಸ ಆಗಲಿದೆ ಎಂಬ ನಿಖರವಾದ ವಿವರಗಳಿರುತ್ತವೆ. ಇದನ್ನು ಆಧರಿಸಿ ಆಯಾ ಇಲಾಖೆಯ ಎಚ್ಆರ್ಎಂಎಸ್ನಲ್ಲಿ ವೇತನ ಪರಿಷ್ಕರಣೆಯ ವಿವರಗಳನ್ನು ಅಳವಡಿಸಲಾಗುತ್ತದೆ. ಕೈಪಿಡಿ ಸಿದ್ಧಗೊಳಿಸುವಾಗ ವಿಳಂಬವಾಗಿದ್ದರಿಂದ ಪರಿಷ್ಕೃತ ವೇತನ ಪಡೆಯಲು ಇನ್ನೆರಡು ತಿಂಗಳು ಕಾಯಬೇಕಾದೀತು ಎಂದು ಕೆಲವು ನೌಕರರು ‘ಪ್ರಜಾವಾಣಿ’ ಜೊತೆ ಆತಂಕ ತೋಡಿಕೊಂಡಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಹಣ
ಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ‘ಕೈಪಿಡಿ ಸಿದ್ಧಪಡಿಸಲಾಗುತ್ತಿದೆ. ಎಚ್
ಆರ್ಎಂಎಸ್ನಲ್ಲೂ ಪರಿಷ್ಕೃತ ವೇತನ ಶ್ರೇಣಿಯನ್ನು ಆದಷ್ಟು ಶೀಘ್ರ ಅಳವಡಿಸಲಿದ್ದೇವೆ. ಏಪ್ರಿಲ್ ತಿಂಗಳ ವೇತನದಲ್ಲೇ ಪರಿಷ್ಕೃತ ಮೊತ್ತವನ್ನೂ ಸೇರಿಸಿ ನೀಡುವುದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.
ತುಂಬಾ ಒಳ್ಳೆಯ ನಿರ್ಧಾರ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಕನಸ್ಸು ಇಡೇರುವಂತಾಗಿದೆ
ReplyDeleteGood decision
ReplyDeleteThis comment has been removed by a blog administrator.
ReplyDelete